ಅಮೆರಿಕದಲ್ಲಿ ಸರಣಿ ದಾಳಿಗಳು: ಬೆಚ್ಚಿಬಿದ್ದ ವಿಶ್ವ- Series of Attacks in America: The World is Shaken
AMERICA : ಜಗತ್ತಿನ ಬಲಿಷ್ಠ ರಾಷ್ಟ್ರ, ವಿಶ್ವದ ಅಘೋಷಿತ ನಾಯಕ ಅಮೆರಿಕಾ, ಉಗ್ರರ ಅಟ್ಟಹಾಸಕ್ಕೆ ಸಾಕ್ಷಿಯಾಗುತ್ತಿದೆ. ಅಮೆರಿಕಾದಲ್ಲಿ ಎಲ್ಲೆಂದರಲ್ಲಿ ಸರಣಿ ದಾಳಿಗಳು ನಡೆಯುತ್ತಿದ್ದು, ಇಡೀ ವಿಶ್ವವೇ ಬೆಚ್ಚಿಬಿದ್ದಿದೆ.
ಒಂದೆಡೆ ನ್ಯೂಯಾರ್ಕ್ನಲ್ಲಿ ಗುಂಡಿನ ದಾಳಿ, ಇನ್ನೊಂದೆಡೆ ಟ್ರಂಪ್ ಹೋಟೆಲ್ ಬಳಿ ಸ್ಪೋಟ, ಮತ್ತೊಂದೆಡೆ ನ್ಯೂ ಓರ್ಲಿನ್ಸ್ನಲ್ಲಿ ಲಾರಿ ನುಗ್ಗಿಸಿ ದಾಳಿ – ಹೀಗೆ ಅಮೆರಿಕದಲ್ಲಿ ನಡೆಯುತ್ತಿರುವ ಘಟನೆಗಳು ಆತಂಕವನ್ನು ಸೃಷ್ಟಿಸಿವೆ.
ಘಟನೆಗಳ ವಿವರ
-
ನ್ಯೂಯಾರ್ಕ್ ಗುಂಡಿನ ದಾಳಿ ನ್ಯೂಯಾರ್ಕ್ನ ಕ್ವೀನ್ಸ್ ಸಿಟಿಯ ನೈಟ್ ಕ್ಲಬ್ನಲ್ಲಿ ಬಂದೂಕುದಾರಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ. ಬಂದೂಕುದಾರಿ ಯಾರು ಮತ್ತು ಆತನನ್ನು ಬಂಧಿಸಲಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
-
ಟ್ರಂಪ್ ಹೋಟೆಲ್ ಸ್ಪೋಟ ಲಾಸ್ ವೇಗಸ್ನ ಡೊನಾಲ್ಡ್ ಟ್ರಂಪ್ ಹೋಟೆಲ್ ಹೊರಗೆ ಪಿಕಪ್ ಟ್ರಕ್ ಒಂದು ಸ್ಪೋಟಗೊಂಡಿದೆ. ಟ್ರಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಟ್ರಕ್ನಲ್ಲಿ ಇಂಧನ ಕಂಟೈನರ್ಗಳು ಮತ್ತು ಪಟಾಕಿಗಳು ಪತ್ತೆಯಾಗಿವೆ. ಇದು ಭಯೋತ್ಪಾದಕ ಕೃತ್ಯವೋ ಅಲ್ಲವೋ ಎಂದು ಎಫ್ಬಿಐ ತನಿಖೆ ನಡೆಸುತ್ತಿದೆ.
-
ನ್ಯೂ ಓರ್ಲಿನ್ಸ್ ಲಾರಿ ದಾಳಿ: ನ್ಯೂ ಓರ್ಲಿನ್ಸ್ನಲ್ಲಿ ವ್ಯಕ್ತಿಯೊಬ್ಬ ಜನಸಂದಣಿ ಇದ್ದ ಜಾಗಕ್ಕೆ ಟ್ರಕ್ ನುಗ್ಗಿಸಿ 15 ಮಂದಿಯನ್ನು ಬಲಿ ಪಡೆದ ಕೆಲವೇ ಗಂಟೆಗಳಲ್ಲಿ ಈ ಸ್ಪೋಟ ಸಂಭವಿಸಿದೆ. ನ್ಯೂ ಓರ್ಲಿನ್ಸ್ ದಾಳಿಯನ್ನು ಉಗ್ರ ಕೃತ್ಯ ಎಂದು ಪರಿಗಣಿಸಲಾಗಿದ್ದು, ಈ ಎರಡೂ ದಾಳಿಗಳಿಗೆ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ತನಿಖೆ ಮತ್ತು ಪ್ರತಿಕ್ರಿಯೆಗಳು :
ಟೆಸ್ಲಾ ಸಿಇಒ ಎಲಾನ್ ಮಸ್ಕ್, ಸ್ಪೋಟಗೊಂಡ ಸೈಬರ್ ಟ್ರಕ್ ಮತ್ತು ನ್ಯೂ ಓರ್ಲಿನ್ಸ್ ದಾಳಿಯಲ್ಲಿ ಬಳಸಲಾದ ಟ್ರಕ್ ಒಂದೇ ಕಾರ್ ರೆಂಟಲ್ ಸೈಟ್ನಿಂದ ಪಡೆಯಲಾಗಿದೆ ಎಂದು ಹೇಳುವ ಮೂಲಕ ಈ ಎರಡೂ ಘಟನೆಗಳಿಗೆ ಲಿಂಕ್ ಇದೆ ಎಂದು ಸೂಚಿಸಿದ್ದಾರೆ. ಲಾಸ್ ವೇಗಸ್ ಪೊಲೀಸರು ಘಟನಾ ಸ್ಥಳಕ್ಕೆ ಹೋಗುವುದನ್ನು ತಪ್ಪಿಸುವಂತೆ ಜನರಿಗೆ ಸೂಚಿಸಿದ್ದಾರೆ ಮತ್ತು ಟ್ರಂಪ್ ಹೋಟೆಲ್ನಲ್ಲಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ನ್ಯೂ ಓರ್ಲಿನ್ಸ್ ಲಾರಿ ದಾಳಿಯ ಚಾಲಕ 42 ವರ್ಷದ ಸಂಶುದ್ದೀನ್ ಜಬ್ಬರ್, ಐಎಎಸ್ನಿಂದ ಪ್ರಚೋದನೆಗೆ ಒಳಗಾಗಿ ಈ ದಾಳಿ ಮಾಡಿರಬಹುದು ಎಂದು ಅಮೆರಿಕಾ ಹೇಳಿದೆ. ಆತನ ಲಾರಿಯಲ್ಲಿ ಉಗ್ರ ಸಂಘಟನೆಯ ಧ್ವಜ ಪತ್ತೆಯಾಗಿದೆ. ಜಬ್ಬರ್ ಅಮೆರಿಕಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಆತ 2007 ರಿಂದ 2015 ರವರೆಗೆ ಆರ್ಮಿಯಲ್ಲಿ ಐಟಿ ಸ್ಪೆಷಲಿಸ್ಟ್ ಆಗಿದ್ದ ಮತ್ತು 2020 ರವರೆಗೆ ಆರ್ಮಿ ರಿಸರ್ವ್ನಲ್ಲಿ ಕಾರ್ಯನಿರ್ವಹಿಸಿದ್ದ. 2009-2010 ರಲ್ಲಿ ಅಫ್ಘಾನ್ನಲ್ಲಿ ಸೈನಿಕನಾಗಿಯೂ ಸೇವೆ ಸಲ್ಲಿಸಿದ್ದ.
ಆರ್ಮಿಯಿಂದ ನಿವೃತ್ತಿಯಾದ ನಂತರ, ಜಬ್ಬರ್ ಕನ್ಸಲ್ಟಿಂಗ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಮತ್ತು ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಸಂಪಾದನೆ ಮಾಡುತ್ತಿದ್ದ. ಆದರೆ ಆತ ಎರಡು ಮದುವೆಯಾಗಿದ್ದ ಮತ್ತು 2022 ರಲ್ಲಿ ಎರಡನೇ ಹೆಂಡತಿಯಿಂದ ವಿಚ್ಛೇದನ ಪಡೆಯುವಾಗ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದ. ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಹಣ ಕಳೆದುಕೊಂಡಿದ್ದ ಮತ್ತು ವಕೀಲರಿಗೆ ಹಣ ನೀಡಲು ಸಾಲ ಮಾಡಿಕೊಂಡಿದ್ದ. ದಾಳಿಗೂ ಕೆಲ ದಿನಗಳ ಮುಂಚೆ ಇಸ್ಲಾಂಗೆ ಮತಾಂತರಗೊಂಡು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ವರದಿಯಾಗಿದೆ.
ಈ ಘಟನೆಗಳ ಕುರಿತು ಎಫ್ಬಿಐ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ.
ಅಮೆರಿಕದಲ್ಲಿ ನಡೆಯುತ್ತಿರುವ ಈ ಸರಣಿ ದಾಳಿಗಳು ಆತಂಕವನ್ನು ಹುಟ್ಟಿಸಿವೆ. ತನಿಖೆಯ ಫಲಿತಾಂಶಗಳು ಮತ್ತು ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.
FOR MORE NEWS RELATED CONTENT CLICK HERE
PETROL AND DIESEL AT GST PRICE ??? CLICK HERE